Breaking News
recent

ರಂಗಿತರಂಗ ನೋಡಲು ಬಂದ ರೆಡ್ಡಿ ಅಂಡ್ ಗ್ಯಾಂಗ್

ಸ್ಯಾಂಡಲ್ ವುಡ್ ನಲ್ಲಿ ಭಾರಿ ಕುತೂಹಲ ಕೆರಳಿಸಿದ ಹೊಸಬರ ಚಿತ್ರ 'ರಂಗಿತರಂಗ' ವನ್ನು ಸ್ಯಾಂಡಲ್ ವುಡ್ ಸ್ಟಾರ್ ಗಳು ನೋಡಿದ್ದು ಆಯ್ತು ಕಮೆಂಟ್ ಮಾಡಿದ್ದು ಆಯ್ತು. ಇದೀಗ ರಾಜಕಾರಣಗಳಲ್ಲಿ ದೊಡ್ಡ ದೊಡ್ಡ ಸಾಧನೆ ಮಾಡಿದ ಕುಳಗಳು ಚಿತ್ರ ವೀಕ್ಷಿಸಲು ಉತ್ಸಾಹ ತೋರುತ್ತಿದ್ದಾರೆ.
ಯಾರಪ್ಪಾ ಆ ದೊಡ್ಡ ಕುಳ ಅನ್ಕೊಂಡ್ರ ಅವರೇ ನಮ್ಮ ಬಳ್ಳಾರಿ ಗಣಿಗೆ ಧಣಿಯಾಗಿದ್ರಲ್ಲ ಜನಾರ್ದನ ರೆಡ್ಡಿ ಅವರು ಇದೀಗ 'ರಂಗಿತರಂಗ' ಚಿತ್ರ ನೋಡಲು ತಯಾರಾಗಿದ್ದಾರೆ.
Janardhana Reddy to watch well Appreciated Movie 'RangiTaranga
ಇಂದು ಬೆಂಗಳೂರಿನ ಮಾಗಡಿ ರೋಡ್ ಬಳಿ ಇರುವ ಇ.ಟಿ.ಎ ಮಾಲ್ ನಲ್ಲಿ ಗಣಿ ಧಣಿ ಜನಾರ್ದನ ರೆಡ್ಡಿ, ಅನುಪ್ ಭಂಡಾರಿ ಆಕ್ಷನ್-ಕಟ್ ಹೇಳಿರುವ ಬಾಕ್ಸಾಫೀಸ್ ಚಿಂದಿ ಮಾಡಿದ ಚಿತ್ರ 'ರಂಗಿತರಂಗ' ಚಿತ್ರ ವೀಕ್ಷಿಸಲಿದ್ದಾರೆ.
ಕರ್ನಾಟಕದಾದ್ಯಂತ ಹವಾ ಎಬ್ಬಿಸಿರುವ 'ರಂಗಿತರಂಗ' ವಿದೇಶದಲ್ಲೂ ತನ್ನ ಕಂಪನ್ನು ಪಸರಿಸುತ್ತಿದೆ. ಈಗಾಗಲೇ ಯುರೋಪ್, ಯು.ಎಸ್.ಎ, ಕೆನಡಾ, ಸಿಂಗಾಪುರ್ ಮುಂತಾದೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. .
ಈಗಾಗಲೇ ಎಲ್ಲೆಡೆ ಹೌಸ್ ಫುಲ್ ಬೋರ್ಡ್ ನೇತು ಹಾಕಿಕೊಂಡು ಭರ್ಜರಿ ಕಲೆಕ್ಷನ್ ಮಾಡುತ್ತಿರುವ 'ರಂಗಿತರಂಗ', ಈ ವರ್ಷದ ಅತ್ಯಂತ ದೊಡ್ಡ ಬಜೆಟ್ ನ ಚಿತ್ರ ಎಸ್.ಎಸ್. ರಾಜಮೌಳಿ ಚಿತ್ರ 'ಬಾಹುಬಲಿ' ಹಾಗೂ ಸಲ್ಮಾನ್ ಖಾನ್ 'ಭಜರಂಗಿ ಭಾಯ್ ಜಾನ್' ಚಿತ್ರವನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ.
ಇಷ್ಟರಮಟ್ಟಿಗೆ ಸುದ್ದಿ ಮಾಡುತ್ತಿರುವ ಕನ್ನಡ ಚಿತ್ರ ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಪಡೆದುಕೊಂಡಿದ್ದು, ಕನ್ನಡದ ಸ್ಟಾರ್ ನಟರಾದ ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಯಶ್, ಶ್ರೀಮುರಳಿ ಮುಂತಾದವರು ಚಿತ್ರ ವೀಕ್ಷಿಸಿ ಉತ್ತಮ ಪ್ರಶಂಸೆ ವ್ಯಕ್ತಪಡಿಸಿದ್ದರು.
ಇದೀಗ ಜನಾರ್ದನ ರೆಡ್ಡಿ ಸರದಿ, ಇನ್ನು ಅದ್ಯಾವ ರಾಜಕಾರಣಿಗಳು ಚಿತ್ರ ವೀಕ್ಷಿಸುವ ಮನಸ್ಸು ಮಾಡ್ತಾರೆ ಅನ್ನೋದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ. ಒಟ್ನಲ್ಲಿ ಗಾಂಧಿನಗರದಲ್ಲಿ ಹೊಸಬರು ಕೂಡ ಹವಾ ಎಬ್ಬಿಸಬಹುದು ಅಂತ 'ರಂಗಿತರಂಗ' ಪ್ರೂವ್ ಮಾಡಿದೆ
Rangitaranga (2015) Kannada Movie Mp3 Songs Free Download

Fresh Kannada

Fresh Kannada

No comments:

Post a Comment

Google+ Followers

Powered by Blogger.