Breaking News
recent

ಶಿವರಾಜ್‌ಕುಮಾರ್ ಮಗಳ ಮದುವೆಗೆ ಇಳಿಯಲಿದೆ ತಾರಾಲೋಕ

ಶಿವರಾಜ್‌ಕುಮಾರ್ ಅವರ ಮಗಳು ನಿರುಪಮಾ ಮದುವೆ ಆಗಸ್ಟ್ 30 ಹಾಗೂ 31ರಂದು ನಡೆಯಲಿದೆ. ಶಿವರಾಜ್ ದಂಪತಿ ಈಗಾಗಲೇ ಮದುವೆಯ ಕರೆಯೋಲೆ ಕೊಟ್ಟು ಅತಿಥಿಗಳಿಗೆ ಆಮಂತ್ರಣ ನೀಡಲು ಶುರುಮಾಡಿದ್ದಾರೆ. ಈ ಕಾರ್ಯ ಚೆನ್ನೈನಿಂದಲೇ ಪ್ರಾರಂಭವಾಗಿದೆ.

ಮದುವೆಯ ಆಮಂತ್ರಣ ಪತ್ರಿಕೆ ತುಂಬ ಸ್ಪೆಷಲ್ ಆಗಿದೆ. ಕಲಾವಿದರಿಗೆ ಕೊಡಲು ವಿಶೇಷವಾಗಿ ಡಿಸೈನ್ ಮಾಡಿಸಲಾಗಿದೆ. ಸ್ನೇಹಿತರು ಹಾಗೂ ಇತರರಿಗೆ ಕೊಡುವ ಆಹ್ವಾನ ಪತ್ರಿಕೆ ಮತ್ತೊಂದು ರೀತಿಯಲ್ಲಿದೆ. ಇನ್ನೂ ಕನ್ನಡ ಚಿತ್ರರಂಗದ ಯಾವ ಗಣ್ಯರಿಗೂ ಮದುವೆಯ ಕರೆಯೋಲೆ ತಲುಪಿಲ್ಲ. ಹೊರಗಿನ ಅತಿಥಿಗಳಿಗೆ ತಲುಪಿಸಿದ ನಂತರ ಕನ್ನಡದ ಕಲಾವಿದರಿಗೆ ಆಹ್ವಾನ ಪತ್ರಿಕೆ ಕೊಡಲಾಗುತ್ತದೆ ಎಂದು ಗೀತಾ ಶಿವರಾಜ್‌ಕುಮಾರ್ ಮದುವೆ ಬಗ್ಗೆ ಮಾಹಿತಿ ಕೊಡುತ್ತಾರೆ.

ಶಿವರಾಜ್‌ಕುಮಾರ್ ದಂಪತಿ ಈಗಾಗಲೇ ಚೆನ್ನೈಗೆ ಹೋಗಿ ರಜನೀಕಾಂತ್ ಅವರಿಗೆ ಆಹ್ವಾನ ಪತ್ರಿಕೆ ನೀಡಿದ್ದಾರೆ. ಅಲ್ಲಿಂದ ಹೈದ್ರಾಬಾದ್‌ಗೆ ಹೋಗಿ ಮೆಗಾಸ್ಟಾರ್ ಚಿರಂಜೀವಿ, ಮೋಹನ್ ಬಾಬು, ಅಲ್ಲು ಅರ್ಜುನ್, ಜೂನಿಯರ್ ಎನ್.ಟಿ.ಆರ್. ನಾಗಾರ್ಜುನ್ ಫ್ಯಾಮಿಲಿಯನ್ನು ಆಹ್ವಾನಿಸಲಿದ್ದಾರೆ. ನಂತರ ಮಲಯಾಳಂ ಚಿತ್ರರಂಗದ ಮೋಹನ್‌ಲಾಲ್, ಮಮ್ಮೂಟಿ ಅವರಿಗೂ ಮದುವೆ ಕರೆಯೋಲೆ ತಲುಪಲಿದೆ. ಡಾ.ರಾಜ್‌ಕುಮಾರ್ ಫ್ಯಾಮಿಲಿಗೆ ಈ ಇಬ್ಬರೂ ಸ್ಟಾರ್‌ಗಳು ಹತ್ತಿರದ ಸ್ನೇಹಿತರು. ಇತ್ತೀಚೆಗಷ್ಟೇ ಮೋಹನ್‌ಲಾಲ್, ಪುನೀತ್ ಜತೆ ಮೈತ್ರಿ ಸಿನಿಮಾದಲ್ಲಿ ನಟಿಸಿದ್ದರು. ಆ ಸಮಯದಲ್ಲಿ ಶಿವರಾಜ್‌ಕುಮಾರ್ ಮೋಹನ್‌ಲಾಲ್‌ರನ್ನು ಭೇಟಿಯಾಗಿದ್ದರು.

ಬಾಲಿವುಡ್‌ನ ಅಮಿತಾಭ್ ಬಚ್ಚನ್ ಮನೆಗೂ ಆಹ್ವಾನ ನೀಡಲು ಹೋಗಲಿದ್ದಾರೆ ಈ ದಂಪತಿ. ಬಿಗ್ ಬಿ ಜತೆ ಶಿವರಾಜ್‌ಕುಮಾರ್ ಕಲ್ಯಾಣ್ ಜುವೆಲರಿ ಜಾಹೀರಾತಿನಲ್ಲಿ ಒಟ್ಟಿಗೆ ನಟಿಸಿದ್ದರು. ಅಷ್ಟೇ ಅಲ್ಲ ರಾಜ್‌ಕುಮಾರ್ ಫ್ಯಾಮಿಲಿ ಅಂದರೆ ಬಿಗ್ ಬಿಗೆ ಎಲ್ಲಿಲ್ಲದ ಗೌರವ. ಪುನೀತ್ ರಾಜ್‌ಕುಮಾರ್ ಕನ್ನಡದ ಕೋಟ್ಯಧಿಪತಿ ರಿಯಾಲಿಟಿ ಷೋ ನಡೆಸಿಕೊಡುವ ಮೊದಲು, ಬಿಗ್ ಬಿ ಅವರನ್ನು ಮೀಟ್ ಮಾಡಿದ್ದರು.

ಚಂದ್ರಬಾಬು ನಾಯ್ಡು ಕೂಡ ಮದುವೆಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬೆಂಗಳೂರಿನ ಲೀಲಾ ಪ್ಯಾಲೆಸ್‌ನಲ್ಲಿ ಸುಮಾರು 40 ಸಾವಿರ ಗಣ್ಯರ ಸಮ್ಮುಖದಲ್ಲಿ ಮದುವೆ ನಡೆಯಲಿದೆ ಎಂದು ಶಿವರಾಜ್‌ಕುಮಾರ್ ಅವರ ಆಪ್ತ ಮೂಲಗಳು ತಿಳಿಸಿವೆ. -----

ಮದುವೆಗೆ ಚೆನ್ನೈನಿಂದ ಅತಿಥಿಗಳನ್ನು ಕರೆಯುವ ಕೆಲಸ ಪ್ರಾರಂಭಿಸಲಾಗಿದೆ. ರಾಜ್ ಮನೆತನಕ್ಕೆ ಹತ್ತಿರ ಇರುವ ಎಲ್ಲ ಸ್ನೇಹಿತರನ್ನು ಮದುವೆಗೆ ಕರೆಯುತ್ತಿದ್ದೇವೆ. - ಗೀತಾ ಶಿವರಾಜ್‌ಕುಮಾರ್
Fresh Kannada

Fresh Kannada

No comments:

Post a Comment

Google+ Followers

Powered by Blogger.