Breaking News
recent

'ಬುಲೆಟ್ ಬಸ್ಯಾ' ಮೂಲಕ ಕಥೆಗಾರನಾದ ಶರಣ್

ಸ್ಯಾಂಡಲ್ ವುಡ್ ಸ್ಟಾರ್, ಕಾಮಿಡಿ ಕಿಂಗ್ ಶರಣ್ ಯಾರಿಗೆ ಗೊತ್ತಿಲ್ಲ ಹೇಳಿ. ಇತ್ತೀಚೆಗೆ ಅವರ ಅಭಿನಯದ ಸಾಲು-ಸಾಲು ಚಿತ್ರಗಳು ಹಿಟ್ ಲಿಸ್ಟ್ ಸೇರಿಕೊಳ್ತಾ ಇರೋದ್ರಿಂದ ಶರಣ್ ಫುಲ್ ಖುಷ್ ಆಗ್ಬಿಟ್ಟಿದ್ದಾರೆ.
ಮೊದಲು ಕಾಮಿಡಿ ಪಾತ್ರಗಳಲ್ಲಿ ಕಾಣಿಸಿಕೊಳ್ತಿದ್ದ ಶರಣ್ ಈಗ ನಾಯಕನ ಪಟ್ಟಕ್ಕೇರಿದ್ದಾರೆ. ಅಲ್ಲದೇ ಸಿಂಗರ್ ಕೂಡ ಆಗಿ ಸೂಪರ್ ಹಿಟ್ ಸಾಂಗ್ಸ್ ನೀಡಿರುವ ಶರಣ್ ಇದೀಗ ಲೇಟೆಸ್ಟ್ ಆಗಿ ಸ್ಕ್ರಿಪ್ಟ್ ಬೇರೆ ಬರೆದಿದ್ದಾರೆ. [ಸೆನ್ಸಾರ್ ನಿಂದ ಕ್ಲೀನ್ ಚಿಟ್ ಪಡೆದ ಶರಣ್ 'ಬುಲೆಟ್ ಬಸ್ಯಾ']
ಹೌದು, ಜುಲೈ 24 ರಂದು ತೆರೆ ಕಾಣುತ್ತಿರುವ ಶರಣ್ ಮತ್ತು ಹರಿಪ್ರಿಯ ಲೀಡ್ ರೋಲ್ ನಲ್ಲಿ ಕಾಣಿಸಿಕೊಂಡಿರುವ 'ಬುಲೆಟ್ ಬಸ್ಯಾ' ಚಿತ್ರಕ್ಕೆ ಖುದ್ದು ಶರಣ್ ಸ್ಕ್ರಿಪ್ಟ್ ಬರೆದಿದ್ದಾರಂತೆ. ಅಸಲಿಗೆ, ಶರಣ್ ಗೆ ತಮ್ಮ ಎರಡನೇ ಚಿತ್ರ 'ವಿಕ್ಟರಿ' ಮೇಕಿಂಗ್ ಸಂದರ್ಭದಲ್ಲೇ 'ಬುಲೆಟ್ ಬಸ್ಯಾ' ಚಿತ್ರಕಥೆ ಹೊಳೆದಿತ್ತಂತೆ. ಆದ್ರೆ ಕಾರಣಾಂತರಗಳಿಂದ ಅದು ಕೈಗೂಡಿರಲಿಲ್ಲ.[ಬುಲ್ಲೆಟ್ ಬಸ್ಯಾನೋ ಮಳೆನೋ, ಒಟ್ನಲ್ಲಿ ಎರಡೂ ಮುಳುಗದಿರಲಿ]
ಈಗ ಜಯತೀರ್ಥ ನಿರ್ದೇಶನದಲ್ಲಿ ಶರಣ್ ಬುಲೆಟ್ ಏರಿರೋದ್ರಿಂದ ಅವರಿಗೆ ಶರಣ್ ಧನ್ಯವಾದ ಸಲ್ಲಿಸಿದ್ದಾರೆ. ''ಜಯತೀರ್ಥ ಸಪೋರ್ಟ್ ಇರಲಿಲ್ಲ ಅಂದಿದ್ರೆ ನಾನು ಚಿತ್ರಕ್ಕೆ ಸ್ಕ್ರೀನ್ ಪ್ಲೇ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಅವರು ನನಗೆ ತುಂಬಾನೇ ಸಹಾಯ ಮಾಡಿದ್ದಾರೆ'' ಅಂತಾರೆ ನಟ ಶರಣ್.
ಜಯಣ್ಣ ಕಂಬೈನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬರುತ್ತಿರುವ ಶರಣ್ 'ಬುಲೆಟ್ ಬಸ್ಯಾ' ಚಿತ್ರಕ್ಕೆ ಅರ್ಜುನ್ ಜನ್ಯ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸದ್ಯಕ್ಕೆ ಗಾಂಧಿನಗರದಲ್ಲಿ ಸಖತ್ ಸೌಂಡ್ ಮಾಡುತ್ತಿರುವ ಶರಣ್ ಇನ್ನೂ ಹೆಚ್ಚು-ಹೆಚ್ಚು ಚಿತ್ರಗಳಿಂದ ಯಶಸ್ವಿಯಾಗಲಿ ಅನ್ನೋದು ನಮ್ಮ ಹಾರೈಕೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.