Breaking News
recent

ಜುಲೈ 8ಕ್ಕೆ 500 ದಿನಗಳನ್ನು ಪೊರೈಸಿದ ಬಾಹುಬಲಿ ಚಿತ್ರ

ಹೈದರಾಬಾದ್: ಚಿತ್ರದ ಶೂಟಿಂಗ್‍ನಿಂದ ಹಿಡಿದು ಬಿಡುಗಡೆಯಾಗುವರೆಗೂ ಒಂದೊಂದೆ ಸುದ್ದಿಯಲ್ಲಿದ್ದ ಬಾಹುಬಲಿ ಈಗ ಚಿತ್ರೀಕರಣ ಆರಂಭವಾದ ದಿನದಿಂದ ಜುಲೈ 8ಕ್ಕೆ 500 ದಿನಗಳನ್ನು ಪೂರೈಸಿದೆ. ಈ ಮೂಲಕ ಚಿತ್ರ ತಯಾರಿಕೆಗೆ 500 ದಿನಗಳನ್ನು ತೆಗೆದುಕೊಂಡ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಬಾಹುಬಲಿ.
ಚಿತ್ರದಲ್ಲಿ ಯಾವುದೇ ಲೋಪ ಕಂಡುಬರದಂತೆ ನೋಡಿಕೊಳ್ಳಲು ಸ್ಕ್ರಿಪ್ಟ್ ಮತ್ತು ಪ್ರೀ ಪ್ರೊಡಕ್ಷನ್ ಪ್ಲಾನ್‍ಗಾಗಿ ರಾಜಮೌಳಿ 180 ದಿನಗಳನ್ನು ತೆಗೆದುಕೊಂಡಿದ್ದರೆ, ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್‍ಗಾಗಿ 320 ದಿನ ಕೆಲಸ ಮಾಡಿದ್ದಾರೆ. ಸುದೀರ್ಘ ಚಿತ್ರೀಕರಣಕ್ಕೆ ಇಡೀ ತಾರಾಬಳಗವೇ ಸಾಥ್ ನೀಡಿದ್ದು, ಬಾಹುಬಲಿ ಒಂದೊಳ್ಳೆ ಚಿತ್ರವಾಗಿ ಹೊರಹೊಮ್ಮಿದೆ ಎಂದು ಟಾಲಿವುಡ್ ಪ್ರಶಂಸೆ ವ್ಯಕ್ತಪಡಿಸಿದೆ.
ಪ್ರಭಾಸ್, ರಾಣಾ ದಗ್ಗುಬಾಟಿ ಮತ್ತು ತಮನ್ನಾ ಮುಖ್ಯ ಪಾತ್ರವನ್ನು ನಿರ್ವಹಿಸಿರುವ ಬಾಹುಬಲಿ ಚಿತ್ರ ಬಿಡುಗಡೆಗೂ ಮುನ್ನವೇ ತೆಲುಗು ಥಿಯೇಟರ್‍ನಲ್ಲಿ ಹೊಸ ದಾಖಲೆ ಬರೆದಿದೆ. ಚಿತ್ರತಂಡ ಚಿತ್ರ ರಿಲೀಸ್ ನಂತರ ಬಾಕ್ಸ್ ಆಫೀಸ್ ರೆಕಾರ್ಡ್ ಬ್ರೇಕ್ ಮಾಡಲಿದೆ ಎಂಬ ಆಶಾಭಾವನೆಯನ್ನು ಚಿತ್ರತಂಡ ವ್ಯಕ್ತಪಡಿಸಿದ್ದು, ಜು.10 ಶುಕ್ರವಾರ ಬಾಹುಬಲಿ ಬಿಡುಗಡೆಯಾಗಲಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.