Breaking News
recent

ಮೈತ್ರಿಯಾ ಪ್ರಕಾರ ಬಿಗ್ ಬಾಸ್ 3 ಬ್ಲಡಿ ಫಿಕ್ಸಿಂಗ್ ಶೋ!

ಮೈತ್ರಿಯಾ ಗೌಡ. ಈಗ ಸಖತ್ ಫೇಮಸ್ಸು. ಇವರ ಬಗ್ಗೆ ಗೊತ್ತಿರೋರೇ ಇಲ್ಲ. ಬಹುಷಃ ಇನ್ನೊಂದ್ ಸ್ವಲ್ಪ ಸುದ್ದಿಯಾಗಿ, ಸದಾನಂದ ಗೌಡ್ರ ರಾಜೀನಾಮೆಯನ್ನೇನಾದ್ರೂ ಕೇಂದ್ರ ಸರ್ಕಾರ ಪಡ್ಕೊಂಡಿದ್ರೆ..., ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಮತ್ತಷ್ಟು ಸುದ್ದಿಯಾಗ್ತಿದ್ದ ಮೈತ್ರಿಯಾ ಹಿಂದಿ ಬಿಗ್ಬಾಸ್ಗೇ ಎಂಟ್ರಿ ಕೊಡ್ತಿದ್ರೇನೋ!
ಆದ್ರೆ ಸದ್ಯ ಕಲರ್ಸ್ ಚಾನಲ್‌ನಲ್ಲಿ ಸದ್ಯದಲ್ಲೇ ಬರಲಿರುವ ಕನ್ನಡದ ಬಿಗ್ಬಾಸ್ ವೇದಿಕೆ ಮಾತ್ರ ಮೈತ್ರಿಯಾ ಗೌಡರನ್ನ ಒಳಗೆ ಕರೆಯೋದು ಖಾತ್ರಿ ಅಂತ ಮಾಧ್ಯಮ ವಲಯ ಮತ್ತು ಸಾರ್ವಜನಿಕರು ಮಾತಾಡಿಕೊಳ್ತಿದ್ದಾರೆ. ಆದ್ರೆ ಈಗ ಬಂದಿರೋ ಸುದ್ದಿಯ ಪ್ರಕಾರ ಮೈತ್ರಿಯಾ ಬಿಗ್ಬಾಸ್ಗೆ ಎಂಟ್ರಿಕೊಡೋಕೆ ನಕ್ಕೋ ಅಂದಿದ್ದಾರಂತೆ.

ಹಿಂದಿನ ಕಥೆಗಳನ್ನ ತಿಳಿದಿರೋ ನೀವು ಓಹೋ ಎಂತಹಾ ಒಳ್ಳೆಯ ಗುಣ ಮೈತ್ರಿಯಾ ಅವ್ರದ್ದು ಅಂತ ನೀವಂದುಕೊಳ್ಳೋದು ಡೌಟು. ಹಾಗಂತ ಮೈತ್ರಿಯಾ ಬಿಗ್ಬಾಸ್ಗೆ ಬರೋಕೆ ಆಗಲ್ಲ ಅನ್ನೋದಕ್ಕೆ ಕೊಡ್ತಿರೋ ಕಾರಣ ಸಿನಿಮಾದಲ್ಲಿ ಬ್ಯುಸಿ ಇದ್ದೀನಿ ಅನ್ನೋದು. ಆದ್ರೆ ಅಂದರ್ ಕೀ ಬಾತ್ ಅಂದ್ರೆ ಮೈತ್ರಿಯಾರಿಗೆ ಬಿಗ್ಬಾಸ್ನಲ್ಲಿ ಕೊಡಲಿರೋ ಸಂಭಾವನೆ ಸಾಲೋದಿಲ್ಲವಂತೆ. ತೀರಾ ಕಡಿಮೆಯಾಯ್ತಂತೆ. ಪಾಪ ಕಾರ್ತಿಕ್ ಗೌಡ ವಿಚಾರದಲ್ಲೂ ಹೀಗೆ ಮಾಡಿಕೊಂಡಿದ್ರೂ ಅನ್ನೋದು ಗಾಳಿ ಸುದ್ದಿ. ['ಬಿಗ್ ಬಾಸ್' ಸೀಸನ್ 3 - ಸುದೀಪ್ 20 ಕೋಟಿ ಡೀಲ್.!?]
ಅಂದ ಹಾಗೆ, ಕಾರ್ತಿಕ್ ಶೆಟ್ಟಿ ಜೊತೆ 'ಅಕ್ಷತೆ' ಎಂಬ ಚಿತ್ರದಲ್ಲಿ ನಟಿಸುತ್ತಿರುವ ಮೈತ್ರಿಯಾ ಗೌಡ ಬಿಗ್ ಬಾಸ್ ಬಗ್ಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಏನು ಹಾಕಿದ್ದಾರೆ ಅಂತ ಒಂದ್ಸಲ ಓದಿಬಿಡಿ. ಬಿಗ್ ಬಾಸ್ 3 ಬ್ಲಡಿ ಫಿಕ್ಸಿಂಗ್ ಶೋ ಅಂತೆ! ಬ್ಲಡಿ ಬಿಗ್ ಬಾಸ್ 3 ತನ್ನ ಹೆಸರು ಹೇಳಿಕೊಂಡು ಫ್ರೀ ಪಬ್ಲಿಸಿಟಿ ಪಡೆದುಕೊಳ್ಳುತ್ತಿದೆಯಂತೆ! ಮೈತ್ರಿಯಾ ಗೌಡ ಅವರ ಹೇಳಿಕೆಯನ್ನು ಕೆಳಗೆ ಯಥಾವತ್ ಪ್ರಕಟಿಸಲಾಗಿದೆ. [ಮೈತ್ರಿಯಾ 'ಅಕ್ಷತೆ' ಗೆ ಕಲ್ಲು ಹಾಕಿದ ಕಾರ್ತಿಕ್ ಗೌಡ]

"Y the bloody bigg boss 3 making free publicity using my name I'm no where interested to go to this bloody fixing show... Stop hurting ppl by making false news... I have no time to go to this show more over... How ppl r soo cheap mentality to put any news before confirmed with the contestants... No bigg boss no time... No interest nd no need of publicity... Don't play with anybodies feelings plzzzzzz...... - feeling hurt."
Fresh Kannada

Fresh Kannada

No comments:

Post a Comment

Google+ Followers

Powered by Blogger.