Breaking News
recent

ನವ ವಧು ರಾಗಿಣಿ!

ರಕ್ಷಾ ಕಟ್ಟೆಬೆಳಗುಳಿ
ಬೆಂಗಳೂರು: ಗುಲಾಬಿ ಬಣ್ಣದ ಸೀರೆ.. ಚಿನ್ನದ ನೆಕ್ಲೆಸ್.. ಸರ, ಓಲೆ, ಮಾರುದ್ದದ ಜಡೆ, ಚಿನ್ನದ ಡಾಬು ಹೀಗೆ ಫುಲ್ ಚಿನ್ನಮಯ ಆಗಿ ನವವಧುವಿನಂತೆ ರೆಡಿಯಾಗಿದ್ದಾಳೆ ತುಪ್ಪದ ಹುಡುಗಿ ರಾಗಿಣಿ.
ನವ ವಧು ರಾಗಿಣಿ!
ತುಪ್ಪಾ ಬೇಕಾ ತುಪ್ಪಾ ಮೂಲಕ ಪಡ್ಡೆ ಹೈಕ್ಳ ಹಾಟ್ ಫೇವರೆಟ್ ಆದ ರಾಗಿಣಿ ಕನ್ನಡ ಚಿತ್ರರಂಗದಲ್ಲಿ ಫುಲ್ ಬ್ಯೂಸಿ ನಟಿ. ಮುಂದಿನ ಎರಡು ವರ್ಷಕ್ಕಾಗುವಷ್ಟು ಚಿತ್ರಗಳನ್ನು ಕೈಲಿಟ್ಟಿಕೊಂಡಿರೋ ತುಪ್ಪದ ಹುಡುಗಿ ಸಧ್ಯ ಮಧುವಣಗಿತ್ತಿಯಂತೆ ಸಿಂಗಾರಗೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ.
ಕೈ ತುಂಬಾ ಮದರಂಗಿ ಹಾಕೊಂಡು, ತುಟ್ಟಿಯಲ್ಲಿ ನಾಚಿಕೆ ಇಟ್ಕೊಂಡು ನೀಡಿರೋ ಪೋಸ್ ನೋಡಿ ಮದ್ವೆ ಸಿದ್ದತೆನಾ ಮೇಡಂ ಅನ್ನೋ ನಮ್ಮ ಪ್ರಶ್ನೆಗೆ. ಎಸ್ ಮಧುಮಗಳಾಗಿ ರೆಡಿಯಾಗಿದ್ದೇನೆ. ಬಟ್ ಮದ್ವೆಗಾಗಿ ಅಲ್ಲ ಮದ್ವೆಗಳಿಗಾಗಿ ನಡೆಯೋ ಮೇಳಕ್ಕಾಗಿ ಅಂತಿದ್ದಾರೆ ತುಪ್ಪದ ಹುಡುಗಿ.
ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ನಡೆಯುವ ಏಷ್ಯಾ ವೆಡ್ಡಿಂಗ್ ಬ್ರೈಡ್ ಮೇಳದ ರಾಯಭಾರಿಯಾಗಿ ರಾಗಿಣಿ ಆಯ್ಕೆಯಾಗಿದ್ದು, ರಾಗಿಣಿ ನವವಧುವಿನ ಕಾಸ್ಟ್ಯೂಮ್‍ನಲ್ಲಿ ನಡೆಸಿರೋ ಫೋಟೋ ಶೂಟ್ ಇದಾಗಿದ್ದು ರಾಗಿಣಿಯ ಈ ಫೋಟೋ ಈಗ ಪಬ್ಲಿಕ್ ಟಿವಿಗೆ ಸಿಕ್ಕಿದೆ.
ಅರೆಬರೆ ಬಟ್ಟೆಯಲ್ಲಿ ಕಾಣಿಸ್ತಾ ಇದ್ದ ರಾಗಿಣಿ ಗುಲಾಬಿ ಸೀರೆಯಲ್ಲಿ ಕಂಗೊಳಿಸ್ತಿರೋದು ಅನೇಕ ಪಡ್ಡೆ ಹೈಕಳ ಕಂಗೆಡಿಸಿತ್ತು. ಆದ್ರೆ, ಅದು ಕೇವಲ ಮೇಳಕ್ಕಾಗಿ ಕೊಟ್ಟ ಪೋಸ್ ಅಂತ ಗೊತ್ತಾದ ಮೇಲೆ ಅಭಿಮಾನಿ ಸಮೂಹ ನಿಟ್ಟುಸಿರು ಬಿಟ್ಟಿದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.