Breaking News
recent

'ಪವರ್ ಸ್ಟಾರ್' ಪುನೀತ್ ರಾಜ್ ಗೆ ಸೆಂಚುರಿ ಸಡಗರ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರಗಳು ಸೆಂಚುರಿ ಭಾರಿಸುವುದು ಹೊಸದಲ್ಲ. ಇದೀಗ ಅವರ ಸೆಂಚುರಿ ಚಿತ್ರಗಳ ಪಟ್ಟಿಗೆ ಅವರ 'ಪವರ್ ***' ಸೇರ್ಪಡೆಯಾಗಿದೆ. ಈ ಚಿತ್ರ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಸೆಂಚುರಿ ಪೂರೈಸಿದೆ. ಈ ಮೂಲಕ ಪುನೀತ್ ಅವರು ಮತ್ತೊಮ್ಮೆ ಬಾಕ್ಸ್ ಆಫೀಸ್ ಕಿಂಗ್ ಎಂಬುದು ಸಾಬೀತಾಗಿದೆ. ಕೆ ಮಾದೇಶ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ತೆಲುಗಿನ 'ದೂಕುಡು' ಚಿತ್ರದ ರೀಮೇಕ್. ಇದು ರೀಮೇಕ್ ಚಿತ್ರವಾದರೂ ಪುನೀತ್ ಅವರು ಡಾನ್ಸ್, ಫೈಟ್ಸ್ ನಲ್ಲಿ ಗಮನಸೆಳೆಯುತ್ತಾರೆ. [ಪವರ್ *** ಚಿತ್ರ ವಿಮರ್ಶೆ] ಒಂದೇ ವಾರದ ಚಿತ್ರದ ಬಜೆಟ್ ವಸೂಲಿ ಮಾಡಿರುವುದು ಪವರ್ *** ಚಿತ್ರದ ಹೆಗ್ಗಳಿಕೆಗಳಲ್ಲಿ ಒಂದು. ಇದುವರೆಗೂ ಚಿತ್ರದ ಒಟ್ಟಾರೆ ಗಳಿಕೆ ರು.50 ಕೋಟಿ ದಾಟಿದೆ ಎನ್ನುತ್ತವೆ ಮೂಲಗಳು. ರು.50 ಕೋಟಿ ಕ್ರಾಸ್ ಮಾಡಿದ ಸ್ಯಾಂಡಲ್ ವುಡ್ ನ ಮೊದಲ ಚಿತ್ರ 'ಪವರ್ ***' 
'ಪವರ್ ಸ್ಟಾರ್' ಪುನೀತ್ ರಾಜ್ ಗೆ ಸೆಂಚುರಿ ಸಡಗರ
ಎಂಬುದು ಇನ್ನೊಂದು ವಿಶೇಷ. ಸರಿಸುಮಾರು ರು.18 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ ಇದುವರೆಗೂ ರು.69 ಕೋಟಿ ಕಲೆಕ್ಷನ್ ಮಾಡಿದ್ದು ನಿರ್ಮಾಪಕರ ಪಾಲಿನ ಡಾರ್ಲಿಂಗ್ ಆಗಿದ್ದಾರೆ ಪುನೀತ್. ಈ ಚಿತ್ರದ ವಿಶಾಲ ಕರ್ನಾಟಕ ಹಂಚಿಕೆದಾರದು ಸಮರ್ಥ್ ವೆಂಚರ್ಸ್, ಹೈದರಾಬಾದ್ ಕರ್ನಾಕಕ್ಕೆ ಶ್ರೀ ಗಣೇಶ್ ಪಿಕ್ಚರ್ಸ್ (ಗಂಗಾವತಿ). ರಾಮ್ ಅಚಂಟ, ಗೋಪಿಚಂದ್ ಅಚಂಟ, ಅನಿಲ್ ಸುಂಕರ ನಿರ್ಮಾಣದ ಈ ಚಿತ್ರಕ್ಕೆ ಎಸ್ ಎಸ್ ಥಮನ್ ಸಂಗೀತ ನೀಡಿದ್ದಾರೆ. ಈ ಚಿತ್ರದ ಮೂಲಕ ತ್ರಿಷಾ ಕೃಷ್ಣನ್ ಅವರು ಕನ್ನಡಕ್ಕೆ ಅಡಿಯಿಟ್ಟಿದ್ದಾರೆ. ಆರಂಭದಲ್ಲಿ ಈ ಚಿತ್ರಕ್ಕೆ ರಾಜಕುಮಾರ ಎಂದು ಹೆಸರಿಡಲಾಗಿತ್ತು. ಆದರೆ ಕಾರಣಾಂತರಗಳಿಂದ ಪವರ್ *** ಎಂದು ಬದಲಾಯಿಸಲಾಯಿತು.
Fresh Kannada

Fresh Kannada

No comments:

Post a Comment

Google+ Followers

Powered by Blogger.