Breaking News
recent

ಪಂಚ ಭೂತಗಳಲ್ಲಿ ಕೆ.ಬಾಲಚಂದರ್ ಲೀನ

ಚೆನ್ನೈ: ಮಂಗಳವಾರ ನಿಧನರಾಗಿದ್ದ ಖ್ಯಾತ ಚಿತ್ರ ನಿರ್ದೇಶಕ, ನಿರ್ಮಾಪಕ ಕೆ ಬಾಲಚಂದರ್ ಅವರ ಅಂತ್ಯಸಂಸ್ಕಾರ ಚೆನ್ನೈನಲ್ಲಿ ನಡೆಯಿತು.
ಪಂಚ ಭೂತಗಳಲ್ಲಿ ಕೆ.ಬಾಲಚಂದರ್ ಲೀನ
ಬುಧವಾರ ಬೆಳಗ್ಗೆಯಿಂದ ಚೆನ್ನೈನ ಮೈಲಾಪುರದ ವಾರನ್ ರಸ್ತೆಯಲ್ಲಿರುವ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.
ರಜನಿಕಾಂತ್, ಕಮಲ್ ಹಾಸನ್, ಎ.ಆರ್. ರೆಹಮಾನ್, ವಿಜಯ್, ಪ್ರಕಾಶ್ ರೈ ಸುಹಾಸಿನಿ ಸೇರಿದಂತೆ ದಕ್ಷಿಣ ಭಾರತದ ತಾರೆಯರು ಅಂತಿಮ ದರ್ಶನ ಪಡೆದರು. ಕನ್ನಡದ ಐದು ಸಿನಿಮಾ ಸೇರಿದಂತೆ 80ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದ ಕೆ ಬಾಲಚಂದರ್, ಸೂಪರ್ ಸ್ಟಾರ್ ರಜನಿಕಾಂತ್, ಕಮಲ್ ಹಾಸನ್, ಸಂಗೀತ ನಿರ್ದೇಶಕ ಎ ಆರ್ ರೆಹಮಾನ್ ಅವರನ್ನ ಚಿತ್ರರಂಗಕ್ಕೆ ಪರಿಚಯಿಸಿದವರು
ಇವರ ಅಪ್ರತಿಮ ಸಾಧನೆಗೆ ದಾದಾ ಸಾಹೇಬ್ ಫಾಲ್ಕೆ ಮುಡಿಗೇರಿತ್ತು. 9 ಬಾರಿ ಫಿಲಂ ಫೇರ್, ಪದ್ಮಶ್ರೀ ಪ್ರಶಸ್ತಿಗಳು ಅರಸಿ ಬಂದಿತ್ತು. ಅಗಲಿದ ಗುರುವಿಗೆ ಅಂತಿಮ ನಮನ ಸಲ್ಲಿಸಿ ಮಾತ್ನಾಡಿದ ರಜನಿಕಾಂತ್, ನನಗೆ ಬಾಲಚಂದರ್ ಬರೀ ಗುರುಗಳು ಮಾತ್ರವಲ್ಲ. ನನಗೆ ತಂದೆ-ತಾಯಿಯೂ ಆಗಿದ್ದರು ಎಂದು ಹೇಳಿದ್ದರು.
Fresh Kannada

Fresh Kannada

No comments:

Post a Comment

Google+ Followers

Powered by Blogger.