Breaking News
recent

Virat kohli anushka sharma planning an engagement soon

Virat kohli anushka sharma planning an engagement soon
Virat kohli anushka sharma planning an engagement soon

ಇವರಿಬ್ಬರ ವರಸೆ ನೋಡುತ್ತಿದ್ದರೆ, ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ಕೈಹಿಡಿಯುವ ದಿನಗಳು ಬಹಳ ದೂರವಿಲ್ಲ ಅನ್ನಿಸುತ್ತದೆ. ಕದ್ದುಮುಚ್ಚಿ ಓಡಾಡಿದ್ದಾಯಿತು, ಬಹಿರಂಗವಾಗಿಯೇ ಕೈಕೈಡಿದಿದು ಹೆಜ್ಜೆಹಾಕಿದ್ದಾಯಿತು. ಇಬ್ಬರ ಪ್ರೇಮಾಯಣ ಈಗ ಮದುವೆ ತನಕ ಬಂದಿದೆ. ಅದ್ಯಾವಾಗ ಇಬ್ಬರೂ ಹಾರ ಬದಲಾಯಿಸಿಕೊಳ್ಳುತ್ತಾರೋ ಎಂದು ಅತ್ತ ಕ್ರಿಕೆಟ್ ಪ್ರೇಮಿಗಳು ಇತ್ತ ಸಿನಿಮಾ ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾದಿದ್ದಾರೆ. ಈ ಜೋಡಿ ಹಕ್ಕಿಗಳ ಮದುವೆ ಎಂದರೆ ಕೇಳಬೇಕೆ ಬಾಲಿವುಡ್, ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಹಬ್ಬದ ಸಂಭ್ರಮ. ಇಬ್ಬರೂ ಒಟ್ಟಿಗೆ ಓಡಾಡುತ್ತಾ, ಆಸ್ಪತ್ರೆ, ಮನೆ ಎಲ್ಲೆಂದರಲ್ಲಿ ಮಾಧ್ಯಮಗಳ ಕಣ್ಣಿಗೆ ಬಿದ್ದು ಇನ್ನಷ್ಟು ಸುದ್ದಿಗೆ ಆಹಾರವಾಗುತ್ತಿದ್ದಾರೆ. ಇತ್ತೀಚೆಗೆ ಹೈದರಾಬಾದಿನಲ್ಲಿ ಅರ್ಧ ಸೆಂಚುರಿ ಭಾರಿಸಿದ ವಿರಾಟ್ ಗಾಳಿಯಲ್ಲೇ ಅನುಷ್ಕಾ ಅವರಿಗೆ ಫ್ಲೈಯಿಂಗ್ ಕಿಸ್ ಕಳುಹಿಸಿದ್ದರು. ಅವರು ಕಳುಹಿಸಿದ ಚುಂಬನ ಅನುಷ್ಕಾ ಹೃದಯಕ್ಕೇ ತಾಕಿದೆಯಂತೆ. ಇವರಿಬ್ಬರ ಮದುವೆಗೆ ಈಗಾಗಲೆ ತೆರೆಮರೆಯ ಕಸರತ್ತುಗಳು ಜೋರಾಗಿ ನಡೆಯುತ್ತಿವೆ. ಇಬ್ಬರ ಮನೆಯ ಹಿರಿಕರು ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಮಾಧ್ಯಮಗಳ ಇವರಿಬ್ಬರ ಬಗ್ಗೆ ಇಷ್ಟೆಲ್ಲಾ ಸುದ್ದಿಗಳು ಹರಿದಾಡುತ್ತಿದ್ದರೂ ಇವರು ಮಾತ್ರ ಬಾಯಿಬಿಡುತ್ತಿಲ್ಲ. ಶೀಘ್ರದಲ್ಲೇ ಇವರಿಬ್ಬರ ಮದುವೆ ಬಗ್ಗೆ ಅಧಿಕೃತ ಮಾಹಿತಿಯೂ ಹೊರಬೀಳಲಿದೆಯಂತೆ. ಶ್ರೀಲಂಕಾ ಮ್ಯಾಚ್ ಗೆ ವಿಹಾಟ್ ಕೊಹ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಅಮೀರ್ ಖಾನ್ ಅವರ ಬಹುನಿರೀಕ್ಷಿತ 'ಪಿಕೆ' ಚಿತ್ರದಲ್ಲಿ ಅನುಷ್ಕಾ ಬಿಜಿಯಾಗಿದ್ದಾರೆ. ಇಬ್ಬರೂ ಸ್ವಲ್ಪ ರಿಲ್ಯಾಕ್ಸ್ ಆದ ಬಳಿಕ ನಿಶ್ಚಿತಾರ್ಥ ಎನ್ನುತ್ತವೆ ಮೂಲಗಳು.
Fresh Kannada

Fresh Kannada

No comments:

Post a Comment

Google+ Followers

Powered by Blogger.