Breaking News
recent

Radhika kumaraswamy interview ನನ್ನ ಮಗಳೇ ನಂಗೆ ಬಿಗ್ ಗಿಫ್ಟ್

Radhika kumaraswamy interview ನನ್ನ ಮಗಳೇ ನಂಗೆ ಬಿಗ್ ಗಿಫ್ಟ್
Radhika kumaraswamy interview ನನ್ನ ಮಗಳೇ ನಂಗೆ ಬಿಗ್ ಗಿಫ್ಟ್ 
ಲಾಂಗ್ ಗ್ಯಾಪ್ ನಂತ್ರ 'ಸ್ವೀಟಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ಕಮ್ ಬ್ಯಾಕ್ ಮಾಡಿರುವ ರಾಧಿಕಾ ಕುಮಾರಸ್ವಾಮಿಗಿಂದು ಹುಟ್ಟುಹಬ್ಬದ ಸಂಭ್ರಮ. 29ನೇ ವರ್ಷದ ಹುಟ್ಟುಹಬ್ಬವನ್ನ ರಾಧಿಕಾ, ತಮ್ಮ ಅಭಿಮಾನಿಗಳ ಜೊತೆ ಅದ್ದೂರಿಯಾಗಿ ಸೆಲೆಬ್ರೇಟ್ ಮಾಡ್ತಿದ್ದಾರೆ. ರಾಧಿಕಾಗೆ ಸರ್ಪ್ರೈಸ್ ನೀಡ್ಬೇಕು ಅಂತ 'ರುದ್ರತಾಂಡವ' ಚಿತ್ರತಂಡ ಇಂದು ರಾಧಿಕಾ ಮೇಡಂ ಗಾಗಿ ಸ್ಪೆಷಲ್ ಟ್ರೇಲರ್ ಲಾಂಚ್ ಮಾಡ್ತಿದೆ. ಇನ್ನೂ 'ನಮಗಾಗಿ' ಚಿತ್ರತಂಡ ರಾಧಿಕಾ ಇಷ್ಟಪಡುವ ಅನಾಥಾಶ್ರಮದಲ್ಲೇ ಇಂದು ಶೂಟಿಂಗ್ ಫಿಕ್ಸ್ ಮಾಡಿದೆ. ಹಲವಾರು ಸರ್ಪ್ರೈಸಸ್ ಗಳ ಮಧ್ಯೆ ರಾಧಿಕ ಹುಟ್ಟುಹಬ್ಬದ ಸಂಭ್ರಮ ಹೇಗಿದೆ..? ಅಂದಿನ ರಾಧಿಕಾ ಮತ್ತು ಇಂದಿನ ರಾಧಿಕಾರ ಲೈಫ್ ಹೇಗಿದೆ..? ಅನ್ನೋದರ ಕುರಿತು 'ಫ್ರೆಶ್ ಕನ್ನಡ'ಗೆ ರಾಧಿಕಾ ಕುಮಾರಸ್ವಾಮಿ ಸಂದರ್ಶನ ನೀಡಿದ್ದಾರೆ. * ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ರಾಧಿಕಾ... ರಾಧಿಕಾ ಕುಮಾರಸ್ವಾಮಿ - ಥ್ಯಾಂಕ್ ಯ್ಯೂ ಸೋ ಮಚ್. * 29ನೇ ವರ್ಷದ ಹುಟ್ಟುಹಬ್ಬವನ್ನ ಆಚರಿಸಿಕೊಳ್ತಿದ್ದೀರಾ. ಹೇಗಿದೆ ಸಂಭ್ರಮ? - ಸಂಭ್ರಮ ಜೋರಾಗಿದೆ. ಇಷ್ಟು ಗ್ರ್ಯಾಂಡಾಗಿ ಈ ವರ್ಷದ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡ್ತೀನಿ ಅಂದುಕೊಂಡಿರ್ಲಿಲ್ಲ. 'ರುದ್ರತಾಂಡವ' ಚಿತ್ರದ ಟ್ರೇಲರ್ ರಿಲೀಸ್ ಮಾಡಿದ್ದಾರೆ. ಮಧ್ಯಾಹ್ನ 'ನಮಗಾಗಿ' ಚಿತ್ರದ ಶೂಟಿಂಗ್ ಇದೆ. ಬರ್ತಡೇ ದಿನ ಖಾಲಿ ಕೂರಬಾರದು ಅಂತ ಶೂಟಿಂಗ್ ಮಾಡ್ತಿದ್ದೀವಿ. ಸ್ಪೆಷಲ್ ಅಂದ್ರೆ, ನಾನು ಪ್ರತಿ ವರ್ಷ ನನ್ನ ಹುಟ್ಟುಹಬ್ಬವನ್ನ ಅನಾಥಾಶ್ರಮದಲ್ಲಿ ಆಚರಿಸಿಕೊಳ್ಳುತ್ತಿದೆ. ಇವತ್ತೂ 'ನಮಗಾಗಿ' ಚಿತ್ರತಂಡ ಅನಾಥಾಶ್ರಮದಲ್ಲೇ ಶೂಟಿಂಗ್ ಇಟ್ಟುಕೊಂಡಿದೆ. ಅಲ್ಲೂ ಒಂದು ಸರ್ಪ್ರೈಸ್ ಇದೆ ಅಂತಿದ್ದಾರೆ. ಈ ವರ್ಷದ ಬರ್ತಡೆ ಇಷ್ಟೊಂದು ಗ್ರ್ಯಾಂಡಾಗಿ ನಡೀತಿದೆ. ಆದ್ರೆ, ಅದೇ ಮೂರು ವರ್ಷದ ಹಿಂದೆ ನನ್ನ ಫ್ಯಾಮಿಲಿ ಜೊತೆ ಮಾತ್ರ ಬರ್ತಡೇ ಸೆಲೆಬ್ರೇಟ್ ಮಾಡ್ತಿದ್ದೆ. ಕಳೆದ ವರ್ಷ 'ಸ್ವೀಟಿ' ಟೀಂ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದೆ. ಈ ವರ್ಷ ಎರೆಡೆರಡು ಟೀಂ ಜೊತೆ ಸೆಲೆಬ್ರೇಟ್ ಮಾಡೋ ಅವಕಾಶ ಸಿಕ್ಕಿದೆ. ಇದಕ್ಕಿಂತ ಮತ್ತೇನು ಬೇಕು ನಂಗೆ! * ಹಾಗಾದ್ರೆ, ಈ ವರ್ಷ ನಿಮ್ಮ ಜೀವನದ ಬೆಸ್ಟ್ ಬರ್ತಡೆ ಅನ್ನಬಹುದಾ..? - ಇಲ್ಲಾ..! ನನ್ನ ಜೀವನದ ಬೆಸ್ಟ್ ಬರ್ತಡೇ, ನನ್ನ ಮಗಳು ಶಮಿಕಾ ಹುಟ್ಟಿದ ವರ್ಷ. ನಾವಿಬ್ಬರೂ ನವೆಂಬರ್ ನಲ್ಲೇ ಹುಟ್ಟಿದ್ದು. ಸೋ, ಅವಳೇ ನಂಗೆ ಬಿಗ್ ಬರ್ತಡೇ ಗಿಫ್ಟ್. * ವರ್ಷಗಳು ಕಳೆದಷ್ಟು ರಾಧಿಕಾ ಕುಮಾರಸ್ವಾಮಿ ಯಂಗ್ ಅಂಡ್ ಎನರ್ಜಿಟಿಕ್ ಆಗ್ತಿದ್ದಾರಲ್ಲಾ? - ವಯಸ್ಸಾಗ್ತಿದೆ. ಏಜ್ ಆಗ್ತಿದೆ ಅನ್ನೋವಾಗ್ಲೇ ನಾನು ಸಿನಿಮಾಗೆ ರೀಎಂಟ್ರಿ ಕೊಟ್ಟೆ. ಬಟ್ ನಂಗೆ ಪಾಸಿಟೀವ್ ರೆಸ್ಪಾನ್ಸ್ ಸಿಕ್ತು. ಎಲ್ಲರು ಚೆನ್ನಾಗಿ ಕಾಣ್ತೀರಾ, ಗ್ಲಾಮರ್ ಆಗಿದ್ದೀರಾ ಅಂತ ಹೇಳೋವಾಗ ಖುಷಿ ಅನ್ಸುತ್ತೆ. ಇದನ್ನೇ ನಾನು ಮೇನ್ಟೇನ್ ಮಾಡಬೇಕು. [ರಾಧಿಕಾ ಕುಮಾರ ಸ್ವಾಮಿ ಫೋನಿಲ್ಲ, ಮೆಸೇಜಿಲ್ಲ]
Fresh Kannada

Fresh Kannada

No comments:

Post a Comment

Google+ Followers

Powered by Blogger.