Breaking News
recent

Priyamani Denies Dating Govind Padmasoorya

ನಟಿ ಪ್ರಿಯಾಮಣಿ ಬಗೆಗೆ ಸಾಕಷ್ಟು ಬಿಸಿಬಿಸಿ ಸುದ್ದಿಗಳು ಹರಿದಾಡುತ್ತಿದ್ದರೂ ಸದಾ ಕೂಲಾಗಿ ಕಾಣುವ ಬೆಡಗಿ. ಈಗ ತೆರೆಕಂಡು ಯಶಸ್ವಿ ಪ್ರದರ್ಶನ ಕಾಣುತ್ತಿರುವ 'ಅಂಬರೀಶ' ಚಿತ್ರದಲ್ಲಿ ಜಂಬದ ಹುಡುಗಿಯಾಗಿ ಪ್ರಿಯಾಮಣಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಪ್ರಿಯಾಮಣಿ ತಮ್ಮ ಒಂದಷ್ಟು ಫೋಟೋಗಳನ್ನು ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದರು. ಎಲ್ಲರ ಕಣ್ಣು ಬಿದ್ದದ್ದು ಮಾತ್ರ ಪ್ರಿಯಾಮಣಿ ಪಕ್ಕದಲ್ಲಿದ್ದ ಹುಡುಗನ ಮೇಲೆ. ಯಾರಿವನು ಎಂದು ಎಲ್ಲರೂ ತಲೆಕೆಡಿಸಿಕೊಂಡಿದ್ದಾರೆ. ಜೊತೆಗೆ ಪ್ರಿಯಾಮಣಿ ಈ ಹುಡುಗನ ಜೊತೆಗೆ ಬಹಳ ದಿನಗಳಿಂದ ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ ಎಂಬುದು ವಿಶೇಷ. ಮಲಯಾಳಂನ ರಿಯಾಲಿಟಿ ಶೋ ನಿರೂಪಕ ಗೋವಿಂದ್ ಪದ್ಮಸೂರ್ಯ ಎಂಬುವವರೊಂದಿಗೆ ಪ್ರಿಯಾಮಣಿ ಜೂಟಾಟಾ ಆಡುತ್ತಿದ್ದಾರೆ ಎಂಬುದೇ ಆ ಗಾಸಿಪ್ಪು. 


ಇವರಿಬ್ಬರೂ ಎಲ್ಲೆಂದರಲ್ಲಿ ಜೊತೆಯಾಗಿ ಕಾಣಿಸುವುದು, ತಿರುಗಾಡುವುದನ್ನು ನೋಡಿದವರು ಸಂಥಿಂಗ್ ಸಂಥಿಂಗ್ ಎಂದು ಹಾಡಿಕೊಳ್ಳುತ್ತಿದ್ದರಂತೆ. ಈ ಹಾಡು ಪ್ರಿಯಾಮಣಿ ಅವರ ಕಿವಿಗೂ ಬಿದ್ದು ಕೂಡಲೇ ನಥಿಂಗ್ ನಥಿಂಗ್ ಎಂದು ಹಾಡಿದ್ದಾರೆ. ಈ ರಿಯಾಲಿಟಿ ಶೋನಲ್ಲಿ ನಾನೂ ಭಾಗಿಯಾದ ಕಾರಣ ಅವರೊಂದಿಗೆ ಓಡಾಡಿದ್ದೇನೆ ಅಷ್ಟೇ. ನನ್ನ ಬೆಸ್ಟ್ ಫ್ರೆಂಡ್. ಉಳಿದಂತೆ ನೀವು ತಿಳಿದಂತೆ ನಮ್ಮಿಬ್ಬರ ನಡುವೆ ಆ ರೀತಿಯ ಯಾವುದೇ ಕಥೆ ನಡೆದಿಲ್ಲ ಎಂದಿದ್ದಾರೆ. ಒಂದು ವೇಳೆ ಯಾರೊಂದಿಗಾದರೂ ನಾನು ಡೇಟಿಂಗ್ ಮಾಡುವ ಸಂದರ್ಭ ಬಂದರೆ ಖಂಡಿತ ಎಲ್ಲರಿಗೂ ತಿಳಿಸುತ್ತೇನೆ ಎಂದಿದ್ದಾರೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.