Breaking News
recent

ಶಂಕರ್ ನಿರ್ದೇಶನದಲ್ಲಿ ರಜನಿ-ಅಮೀರ್ ಜೋಡಿ

ಶಂಕರ್ ನಿರ್ದೇಶನದಲ್ಲಿ ರಜನಿ-ಅಮೀರ್ ಜೋಡಿ
ಶಂಕರ್ ನಿರ್ದೇಶನದಲ್ಲಿ ರಜನಿ-ಅಮೀರ್ ಜೋಡಿ

ಬಿಗ್ ಬಜೆಟ್ ಚಿತ್ರ 'ಐ' ನಂತರ ಮತ್ತೊಮ್ಮೆ ಶಂಕರ್ ಅವರು ಸೂಪರ್ ಸ್ಟಾರ್ ರಜನಿಗಾಗಿ ಎಂದಿರನ್(ರೋಬೋ) ಚಿತ್ರದ ಎರಡನೇ ಭಾಗಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ ಎಂಬ ಸುದ್ದಿ ಬಂದಿದೆ. ಇದೇ ಚಿತ್ರದ ಹಿಂದಿ ಆವೃತ್ತಿ ರೋಬೋ 2 ರಲ್ಲಿ ರಜನಿ ಜೊತೆಗೆ ಪ್ರಬುದ್ಧ ನಟ ಅಮೀರ್ ಖಾನ್ ನಟಿಸಲಿದ್ದಾರೆ ಎನ್ನಲಾಗಿದೆ. ರೋಬೋ ಚಿತ್ರಕ್ಕೆ ಹಾಕಿದ್ದ ಬಂಡವಾಳದ ಡಬ್ಬಲ್ ಮೊತ್ತದಲ್ಲಿ ಹೊಸ ಚಿತ್ರ ನಿರ್ಮಾಣವಾಗಲಿದೆ. ಅಮೀರ್ ಖಾನ್ ಅವರನ್ನು ಚಿತ್ರಕ್ಕೆ ಬಳಸಿಕೊಳ್ಳಲು ಶಂಕರ್ ಕಥೆ ಹೆಣೆಯುತ್ತಿದ್ದಾರೆ. ಈ ಬಗ್ಗೆ ಅಮೀರ್ ಜೊತೆ ಮಾತುಕತೆ ನಡೆಸಲಾಗಿದ್ದು, ಶಂಕರ್ ಅವರ ಆಫರ್ ಸ್ವೀಕರಿಸಿದ್ದಾರಂತೆ. ಆದರೆ, ಚಿತ್ರದಲ್ಲಿ ರಜನಿ ಹೀರೋ ಆಗಿರುವಾಗ ಅಮೀರ್ ಏನು ಮಾಡುತ್ತಾರೆ? ಧೂಮ್3 ನಂತರ ಮತ್ತೆ ಅಮೀರ್ ವಿಲನ್ ಪಾತ್ರದಲ್ಲಿ ನಟಿಸುತ್ತಾರ? ಎಂಬ ಪ್ರಶ್ನೆಗಳು ಎದ್ದಿವೆ. ಶಂಕರ್ ಕೂಡಾ ರೋಬೋ 2 ಬಗ್ಗೆ ಯಾವುದೇ ವಿಷಯ ಹೊರಹಾಕಿಲ್ಲ. ಅದರೆ, ರಜನಿ-ಅಮೀರ್ ಕಾಂಬಿನೇಷನ್ ಚಿತ್ರ ಬರಲಿದೆ ಎಂಬ ಸುದ್ದಿ ಕೇಳಿ ಈಗಾಗಲೇ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಕುತೂಹಲದ ಸಂಗತಿ ಎಂದರೆ, ರಜನಿಕಾಂತ್ ಅವರಿಗೆ ಕಥೆ ಹೇಳುವುದಕ್ಕೂ ಮುನ್ನ ಶಂಕರ್ ಅವರು ಶಾರುಖ್ ಖಾನ್ ಗೆ ರೋಬೋ ಕಥೆ ಹೇಳಿದ್ದರಂತೆ, ಅದರೆ, ಕಥೆಯಲ್ಲಿ ಲಾಜಿಕ್ ಇಲ್ಲ ಎಂದು ಶಾರುಖ್ ಪಾತ್ರ ಒಪ್ಪಿರಲಿಲ್ಲ ಎಂಬ ಮಾತಿದೆ. ಮುಂದೆ ಐಶ್ವರ್ಯಾ ರೈ ಜೋಡಿಯಾಗಿ ರಜನಿ ಅಭಿನಯಿಸಿ ಮಾಡಿದ ಮ್ಯಾಜಿಕ್ ಎಲ್ಲರಿಗೂ ತಿಳಿದಿದೆ. ಚಿತ್ರದ ಬಗ್ಗೆ ಈಗಲೇ ಏನು ಸ್ಪಷ್ಟವಾಗಿ ಹೇಳಲು ಬರುವುದಿಲ್ಲ, ಎ.ಆರ್ ರೆಹಮಾನ್ ಮ್ಯೂಸಿಕ್ ಡೈರೆಕ್ಷನ್ , ತಮಿಳು ಹಾಗೂ ಹಿಂದಿ ಎರಡರಲ್ಲೂ ಚಿತ್ರ ಬರಲಿದೆ. ಬಾಲಿವುಡ್ ನಟಿ ಈ ಚಿತ್ರಕ್ಕೆ ಹೀರೋಯಿನ್ ಆಗಲಿದ್ದಾಳೆ ಎಂಬುದನ್ನು ಕಣ್ಮುಚ್ಚಿಕೊಂಡು ಹೇಳಬಹುದು. ಅದರೆ, ಎಲ್ಲವೂ ಅಂದುಕೊಂಡಂತೆ ಸೆಟ್ಟೇರಿದಾಗ ಮಾತ್ರ ಅಭಿಮಾನಿಗಳ ನಿರೀಕ್ಷೆಗೂ ಬೆಲೆ ಸಿಗುತ್ತದೆ.
Fresh Kannada

Fresh Kannada

No comments:

Post a Comment

Google+ Followers

Powered by Blogger.