Breaking News
recent

ಕನ್ನಡ ಚಿತ್ರರಂಗಕ್ಕೆ ಅರ್ಜುನ್ ಸರ್ಜಾ ಪುತ್ರಿ ಎಂಟ್ರಿ


ಕನ್ನಡ ಚಿತ್ರರಂಗಕ್ಕೆ ಅರ್ಜುನ್ ಸರ್ಜಾ ಪುತ್ರಿ ಎಂಟ್ರಿ
ಕನ್ನಡ ಚಿತ್ರರಂಗಕ್ಕೆ ಅರ್ಜುನ್ ಸರ್ಜಾ ಪುತ್ರಿ ಎಂಟ್ರಿ

ಅರ್ಜುನ್ ಸರ್ಜಾ ನಟಿಸಿ ನಿರ್ದೇಶಿಸಿರೋ 'ಅಭಿಮನ್ಯು' ಚಿತ್ರ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣ್ತಿದೆ. 'ಅಭಿಮನ್ಯು' ಚಿತ್ರಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಲಭ್ಯವಾಗ್ತಿದೆ. ವರ್ಷಗಳ ನಂತ್ರ ಸ್ಯಾಂಡಲ್ ವುಡ್ ನಲ್ಲಿ ಅರ್ಜುನ್ ಸರ್ಜಾ ಆಕ್ಷನ್ ಕಿಂಗ್ ಆಗಿ ಕಮ್ ಬ್ಯಾಕ್ ಮಾಡಿರೋದು ಕನ್ನಡ ಸಿನಿಪ್ರಿಯರಿಗಂತೂ ಸಖತ್ ಖುಷಿಕೊಟ್ಟಿದೆ. ಇದೇ ಖುಷಿಯಲ್ಲಿ ಅರ್ಜುನ್ ಸರ್ಜಾ ಮತ್ತೊಂದು ಖುಷಿಯ ವಿಷಯವನ್ನ ''ಫಿಲ್ಮಿಬೀಟ್ ಕನ್ನಡ'' ಜೊತೆ ಹಂಚಿಕೊಂಡಿದ್ದಾರೆ. ಅದೇನಪ್ಪಾ ಅಂದ್ರೆ, ಅರ್ಜುನ್ ಸರ್ಜಾ ಸದ್ಯದಲ್ಲೇ ಮತ್ತೊಂದು ಚಿತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಆ ಚಿತ್ರ ಕೂಡ ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲಕ್ಕೆ ರೆಡಿಯಾಗಲಿದೆ. ಆ ಚಿತ್ರದ ನಾಯಕಿ ಯಾರು ಗೊತ್ತೆ? ಬೇರೆ ಯಾರೂ ಅಲ್ಲ...ಖುದ್ದು ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅರ್ಜುನ್. [ಅಭಿಮನ್ಯು ಚಿತ್ರ ವಿಮರ್ಶೆ] ಹೌದು, ಕಳೆದ ವರ್ಷವಷ್ಟೇ ತಮಿಳು ಚಿತ್ರ 'ಪಟ್ಟಥು ಯಾನೈ' ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ಐಶ್ವರ್ಯಾ, ಸದ್ಯದಲ್ಲೇ ತನ್ನ ತಂದೆ ನಿರ್ದೇಶಿಸುವ ಬಹುಭಾಷಾ ಚಿತ್ರಕ್ಕೆ ನಾಯಕಿಯಾಗಲಿದ್ದಾರೆ. ಆ ಮೂಲಕ ಸ್ಯಾಂಡಲ್ ವುಡ್ ಗೆ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯಾ ಅಡಿಯಿಡುವುದು ಕನ್ಫರ್ಮ್ ಆಗಿದೆ. ಐಶ್ವರ್ಯಾಗೆ ನಾಯಕ ಯಾರಾಗ್ತಾರೆ ಅನ್ನೋದು ಇನ್ನೂ ಫೈನಲ್ ಆಗಿಲ್ಲ. ಆದ್ರೆ, ಈಗಾಗ್ಲೇ ಚಿತ್ರಕ್ಕಾಗಿ ಆಕ್ಷನ್-ಲವ್ ಸ್ಟೋರಿಯನ್ನ ರೆಡಿಮಾಡಿರೋ ಅರ್ಜುನ್ ಸರ್ಜಾ, ಸದ್ಯದಲ್ಲೇ ಚಿತ್ರಕ್ಕೆ ಚಾಲನೆ ನೀಡ್ತಾರಂತೆ. [ಅರ್ಜುನ್ ಸರ್ಜಾ ಸಂದರ್ಶನ] ಇದರ ಜೊತೆಗೆ ಚಿತ್ರದುರ್ಗದ ಮದಕರಿ ನಾಯಕನ ಕತೆಯುಳ್ಳ ತ.ರಾ.ಸು ರವರ ಐತಿಹಾಸಿಕ ಕಾದಂಬರಿ ಆಧಾರಿತ 'ದುರ್ಗಾಸ್ತಮಾನ' ಸಿನಿಮಾ ನಿರ್ದೇಶಿಸುವ ಸಿದ್ಧತೆಯನ್ನೂ ಅರ್ಜುನ್ ಸರ್ಜಾ ನಡೆಸುತ್ತಿದ್ದಾರೆ. ಅಲ್ಲಿಗೆ, ಅರ್ಜುನ್ ಸರ್ಜಾ ಅಭಿಮಾನಿಗಳಿಗೆ ಡಬಲ್ ಧಮಾಕಾ ಸಂಭ್ರಮ ಕಾದಿದೆ ಅಂತರ್ಥ. (ಫಿಲ್ಮಿಬೀಟ್ ಕನ್ನಡ ಎಕ್ಸ್ ಕ್ಲೂಸಿವ್)
Fresh Kannada

Fresh Kannada

No comments:

Post a Comment

Google+ Followers

Powered by Blogger.