Breaking News
recent

ಪ್ರಿನ್ಸ್ ಮಹೇಶ್ ಗೆ 'ಚಾರ್ಮಿನಾರ್' ಚಂದ್ರು ಡೈರೆಕ್ಟರ್

ಪ್ರಿನ್ಸ್ ಮಹೇಶ್ ಗೆ 'ಚಾರ್ಮಿನಾರ್' ಚಂದ್ರು ಡೈರೆಕ್ಟರ್
ಪ್ರಿನ್ಸ್ ಮಹೇಶ್ ಗೆ 'ಚಾರ್ಮಿನಾರ್' ಚಂದ್ರು ಡೈರೆಕ್ಟರ್

ಪ್ರೀತಿಗೆ ಅದರ ರೀತಿಗೆ ಹೊಸ ವ್ಯಾಖ್ಯಾನ ಕೊಟ್ಟು ಗಾಂಧಿನಗರದಲ್ಲಿ 'ತಾಜ್ ಮಹಲ್' ಮತ್ತು 'ಚಾರ್ಮಿನಾರ್' ಕಟ್ಟಿದ್ದ ನಿರ್ದೇಶಕ ಆರ್.ಚಂದ್ರು ಟಾಲಿವುಡ್ ಗೆ ಹಾರಿದ್ದಾರೆ. ವರ್ಷದಿಂದ ಹೈದರಾಬಾದ್ ನಲ್ಲೇ ಸೆಟ್ಲ್ ಆಗಿರುವ ಚಂದ್ರು, ಇನ್ನು ಕೆಲವೇ ದಿನಗಳಲ್ಲಿ ಮಹೇಶ್ ಬಾಬುಗೆ ಆಕ್ಷನ್ ಕಟ್ ಹೇಳ್ತಿದ್ದಾರೆ. ಹಾಗಂತ, ಪ್ರಿನ್ಸ್ ಮಹೇಶ್ ಬಾಬು ಹೊಸ ಚಿತ್ರಕ್ಕೆ ಆರ್.ಚಂದ್ರು ನಿರ್ದೇಶನ ಮಾಡ್ತಿಲ್ಲ. ಹೈದರಾಬಾದ್ ನಲ್ಲಿ ಮತ್ತೊಮ್ಮೆ 'ಚಾರ್ಮಿನಾರ್'ಗೆ ಅಡಿಪಾಯ ಹಾಕಿರುವ ಆರ್.ಚಂದ್ರು 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರದಲ್ಲಿ ಮಹೇಶ್ ಬಾಬು ನಿರ್ವಹಿಸಲಿರುವ ಅತಿಥಿ ಪಾತ್ರಕ್ಕೆ ನಿರ್ದೇಶನ ಮಾಡಲಿದ್ದಾರೆ. ಇಲ್ಲಿವರೆಗೂ ಅಂತೆ-ಕಂತೆಗಳ ಕಹಾನಿಯಾಗಿದ್ದ ಈ ಸುದ್ದಿ ಇದೀಗ ನಿಜವಾಗಿದೆ ಅನ್ನುವುದು ಲೇಟೆಸ್ಟ್ ನ್ಯೂಸ್. ಹೇಳಿ ಕೇಳಿ, ಆರ್.ಚಂದ್ರು ಗಿಮಿಕ್ ಮಾಡುವುದರಲ್ಲಿ ಎತ್ತಿದ ಕೈ. ಗಾಂಧಿನಗರ ಸಾಲದು ಅಂತ ಟಾಲಿವುಡ್ ನಲ್ಲೂ ಮಹೇಶ್ ಬಾಬೂ ಹೆಸರನ್ನಿಟ್ಟುಕೊಂಡು ಗಿಮಿಕ್ ಮಾಡ್ತಿದ್ದಾರೆ ಅನ್ನೋದು ಅಂತೆ-ಕಂತೆಗಳಿಗೆ ಕಾರಣವಾಗಿತ್ತು. [ತೆಲುಗು ಚಾರ್ ಮಿನಾರ್ ಗೆ ನಾಗಾರ್ಜುನ ಪುತ್ರ] ಆ ಮೂಲಕ ''ಅತಿಥಿ ಪಾತ್ರಗಳಿಗೆ ಸುತಾರಂ ಒಪ್ಪಿಕೊಳ್ಳದ ಮಹೇಶ್, ಚಂದ್ರು ಮೊದಲ ಚಿತ್ರಕ್ಕೆ ಹೇಗ್ತಾನೆ ಒಪ್ಪಿಕೊಳ್ತಾರೆ'' ಅನ್ನುತ್ತಿದ್ದವರಿಗೆ ಚಂದ್ರು ಕಡೆಗೂ ಉತ್ತರ ಕೊಟ್ಟಿದ್ದಾರೆ. ಅಷ್ಟಕ್ಕೂ ಚಂದ್ರು ಆಕ್ಷನ್ ಕಟ್ ಹೇಳುತ್ತಿರುವ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರದ ಹೀರೋ ಮಹೇಶ್ ಬಾಬು ಭಾವಮೈದ ಸುಧೀರ್ ಬಾಬು. ಇದನ್ನೇ ಅಸ್ತ್ರವಾಗಿರಿಸಿಕೊಂಡ ಚಂದ್ರು, ಸುಧೀರ್ ಮೂಲಕವೇ ಮಹೇಶ್ ಬಾಬುರನ್ನ ಅತಿಥಿ ಪಾತ್ರ ಮಾಡುವುದಕ್ಕೆ ಒಪ್ಪಿಸಿದ್ದಾರಂತೆ. [ಆರ್ ಚಂದ್ರು ಆಕ್ಷನ್ ಕಟ್ ನಲ್ಲಿ ನಟ ನಾಗಾರ್ಜುನ] ಭಾವಮೈದನ ಚಿತ್ರ ಸಕ್ಸಸ್ ಆಗಲಿ ಅನ್ನುವುದಕ್ಕೆ ಮಹೇಶ್ ಕೂಡ ಮುಂದು ಬಂದಿದ್ದಾರಂತೆ. ''ಇನ್ನು ಕೆಲವೇ ದಿನಗಳಲ್ಲಿ ಮಹೇಶ್ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರದ ಶೂಟಿಂಗ್ ನಲ್ಲಿ ಭಾಗವಹಿಸಲಿದ್ದಾರೆ. ಅವರಿಗೆ ಸ್ಪೆಷಲ್ ಎಂಟ್ರಿಯನ್ನ ಚಿತ್ರದಲ್ಲಿ ಪ್ಲಾನ್ ಮಾಡಿದ್ದೀವಿ. ಅವರದ್ದು ತುಂಬಾ ಚಿಕ್ಕ ಪಾತ್ರ. ಈಗಲೇ ಏನು ಬಹಿರಂಗ ಪಡಿಸುವುದಕ್ಕೆ ಆಗಲ್ಲ'', ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಆರ್.ಚಂದ್ರು ತಿಳಿಸಿದ್ದರು. ಸದ್ಯಕ್ಕೆ ಡಬ್ಬಿಂಗ್ ಹಂತ ತಲುಪಿರುವ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಮಹೇಶ್ ಬಾಬು ಎಂಟ್ರಿಕೊಡ್ತಿದ್ದ ಹಾಗೆ ಕುಂಬಕಾಯಿ ಹೊಡೆಯಲಿದೆ. ವರ್ಷದಿಂದ ಹೈದರಾಬಾದ್ ನಲ್ಲೇ ಇರುವ ಚಂದ್ರು, ತವರು ಮನೆಗೆ ಬಂದಿದ್ದೇ ಇಲ್ಲ. 'ಲವ್ಲಿ ಸ್ಟಾರ್' ಪ್ರೇಮ್ ಅಭಿನಯಿಸುತ್ತಿರುವ ಮಳೆ ಚಿತ್ರದ ನಿರ್ಮಾಣ ಹೊತ್ತಿದ್ರೂ ಆ ಕಡೆ ಹೆಚ್ಚಾಗಿ ತಲೆ ಹಾಕಿಲ್ಲ. ಇದೇ ಗ್ಯಾಪಲ್ಲಿ, ಹೊಸ ತೆಲುಗು ಸಿನಿಮಾವೊಂದಕ್ಕೆ ಆರ್.ಚಂದ್ರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. [ಫೆ.14 ನಂತರವಾದ್ರೂ ಪ್ರೇಮ ಮಳೆ ಶುರುವಾಗುತ್ತಾ?] ಈ ಬಗ್ಗೆ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿರುವ ಚಂದ್ರು, ''ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ, ಚಿತ್ರ ರಿಲೀಸ್ ಆಗ್ಬೇಕು. ನಂತ್ರ ಶಿವಣ್ಣನ ಚಿತ್ರ ಇದೆ. ಉಪೇಂದ್ರಗೋಸ್ಕರ ಬಹುಭಾಷಾ ಚಿತ್ರ ಪ್ಲಾನ್ನಿಂಗ್ ನಲ್ಲಿದೆ, ಅದಾದ ನಂತ್ರ ಮತ್ತೊಂದು ತೆಲುಗು ಸಿನಿಮಾ.
Fresh Kannada

Fresh Kannada

No comments:

Post a Comment

Google+ Followers

Powered by Blogger.